ಎಬ್ಬಿಂಗ್‍ಹೌಸ್, ಹೆರ್‍ಮನ್
	1850-1908. ಪ್ರಯೋಗವೇ ಮನಶ್ಶಾಸ್ತ್ರದ ವಿವರಗಳಿಗೆ ಮುಖ್ಯ ಸಾಧನವೆಂದು ಹಟ ಹಿಡಿದು ವೈe್ಞÁನಿಕ ಸಂವಿಧಾನಗಳನ್ನು ಬಹುಮಟ್ಟಿಗೆ ಬಳಸಿದ ಪ್ರತಿಭಾಶಾಲಿಗಳಲ್ಲಿ ಒಬ್ಬ. ಮೊದಲು ಹಾಲೆ ವಿಶ್ವವಿದ್ಯಾನಿಲಯದಲ್ಲೂ ಅನಂತರ ಬ್ರೆಸ್ಲೊ ವಿಶ್ವವಿದ್ಯಾನಿಲಯದಲ್ಲೂ ಮನಶ್ಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. 1885ರಲ್ಲಿ ಸ್ಮøತಿಯ ಮೇಲೆ ರಚಿಸಿದ ಗ್ರಂಥ ಈತನಿಗೆ ವಿಪುಲವಾದ ಯಶಸ್ಸನ್ನು ತಂದಿತು. ಸ್ಮರಣೆಯಲ್ಲಿ ಒದಗುವ ಎರಡು ಮುಖ್ಯ ವಿವರಗಳು ಪುನರಾವೃತ್ತಿ (ರಿಪಿಟಿಷನ್) ಮತ್ತು ಕಾಲ (ಟೈಂ); ಮೊದಲನೆಯದು ವಾಸನೆಗಳನ್ನು ಉತ್ಪಾದನೆ ಮಾಡಿ ದೃಢಪಡಿಸಿದರೆ, ಎರಡನೆಯದು ಅವನ್ನು ಅಳಿಸುತ್ತದೆ. ಅರ್ಥಗ್ರಹಣದಿಂದ ಶ್ರುತಿ ಊರ್ಜಿತವಾಗುತ್ತದೆ. ಕಲಿಯುವ ವಿವಿರಗಳ ನಡುವೆ ಇರುವ ಸಂಯೋಗಕ್ರಿಯೆ ಎಬ್ಬಿಂಗ್‍ಹೌಸನ ಸಂಶೋಧನೆಗಳಲ್ಲಿ ದೃಢಪಟ್ಟಿತು. 1905ರಲ್ಲಿ ಬರೆಯಲಾರಂಭಿಸಿದರೂ ಅಪೂರ್ಣವಾಗಿಯೇ ಉಳಿದ ಈತನ ಮನಶ್ಶಾಸ್ತ್ರದ ಮೂಲಾಧಾರಗಳ ಬಗೆಗಿನ ಒಂದು ಗ್ರಂಥದಲ್ಲಿ ದೇಹ ವಿe್ಞÁನಶಾಸ್ತ್ರ ಮನಶ್ಶಾಸ್ತ್ರಕ್ಕೆ ಅನಿವಾರ್ಯವಾದ ಹಿನ್ನೆಲೆಯೆಂದು ರುಜುವಾತು ಮಾಡಲಾಗಿದೆ. ಈ ಗ್ರಂಥವನ್ನು 1913ರಲ್ಲಿ ಇ.ದುರ್ ಎಂಬ ಆತನ ಶಿಷ್ಯ ಪೂರ್ತಿ ಮಾಡಿ ಪ್ರಕಟಿಸಿದ. 		
  (ಎಸ್.ಕೆ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ